ಕನ್ನಡ ಭಾಷೆ ಶ್ರೀಮಂತವಾದದು ಕನ್ನಡಿಗರ ಕೈಯಲ್ಲಿ ಬಡಪಾಯಿ ಬಿಕುನಾಸಿ

ಸುಮಾರು ಮೂರು ಸಾವಿರ ವರ್ಷ ಇತಿಹಾಸ ಹೊಂದಿದ್ದರೂ ಕನ್ನಡಿಗರಿಗೆ ಇದು ಭಾಷೆ ಅಲ್ಲ ಅಪಹಾಸ್ಯದ ಮೂಟೆ ಆಗಿಬಿಟ್ಟಿದೆ. ಇದು ನನ್ನ ಸ್ವಂತ ಪರಿವಾರದಲ್ಲೆ ಎದ್ದು ಕಾಣುತ್ತಿದೆ. ನಮ್ಮ ದೊಡ್ಡಪ್ಪ ನವರು ಕೇಂದ್ರ ಸರಕಾರದ ಒಂದು ಸಂಶೋಧನ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ನಿವೃತ್ತಿ ಪಡೆದಿದ್ದರು. ಅವರು ಎಲ್ಲದಕ್ಕೂ ಇಂಗ್ಲೀಷಿನಲ್ಲಿ ಹೇಳುತ್ತಾರೆ. ಕನ್ನಡದ ಬಗ್ಗೆ ಏನೆಂದು ಕೇಳಿದರೆ, ಅದೆಲ್ಲ ಕಾಲೇಜಿನ ಕೊನೆ ಮೇಜಿನ ದಡ್ಡರು ಬಿ ಎ ದಲ್ಲಿ ಸಾಹಿತ್ಯದಲಿ ಓದಿಕೊಳ್ಳುವವರು ಬಳಸಿಕೊಳ್ಳಬೇಕು ಅಷ್ಟೆ.. ಅಂತ ಹೇಳುವರು.
ನಾನು ಮೈಸೂರಿನಲ್ಲಿ ಶತಮಾನೋತ್ಸವ ಸಂಭ್ರಮದ ಸಲುವಾಗಿ ನಡೆದ ಸೈನ್ಸ್ ಕಾಂಗ್ರೆಸ್ ಸಮಾವೇಶಕ್ಕೆ ಭಾಗವಹಿಸಿದ್ದೆ. ಅಲ್ಲಿ ನೆರೆದಿದ್ದ ಜನಸಾಗರದಲ್ಲಿ ಬಹುಪಾಲು ಉತ್ತರ ಭಾರತೀಯರು ಆಗಿದ್ದರು. ಎರಡನೇ ದಿನದ ಸಂಜೆ ಯಾವನೋ ಒಬ್ಬ ಉತ್ತರ ಭಾರತಿಯನು ತನ್ನಷ್ಟಕ್ಕೆ ಒಬ್ಬ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ನಿಲ್ಲಿಸಿ - ನಾನು ನಿನ್ನಲ್ಲಿ ನನ್ನ ಅಭಿಪ್ರಾಯವನ್ನು ತಿಳಿಯಬಯಸುತ್ತೇನೆ. ನಾನು ಇತ್ತಿಚೆಗೆ ತಾನೆ ಕೇರಳದ ಮನಮೋಹಕ ದೃಶ್ಯವನ್ನು ಆನಂದಿಸಿ ಬಂದಿದೇನೆ. ನಾನು ಪಂಜಾಬಿನ ಲವ್ಲೀ ಪ್ರೊಫೆಷ್ನಲ್ ವಿಶ್ವವಿದ್ಯಾಲಯದಿಂದ ಬಂದಿರುವೆ. ಇಲ್ಲಿಯೂ ಒಳ್ಳೆ ದೊಡ್ಡ ಕಟ್ಟಡಗಳ ವಿಶ್ವವಿದ್ಯಾಲಯವನ್ನು ಕಟ್ಟಿದ್ದೀರಿ. ಆದರೆ ನಾನು ಕಂಡ ಇಲ್ಲಿನ ಕನ್ನಡ ಜನ ಅಷ್ಟು ವಿವೇಕ ಉಳ್ಳವರು ಆಗಿಲ್ಲ. ನಿಮ್ಮ ದಕ್ಷಿಣ ಭಾರತದ ಕಾಲೇಜುಗಳು ಉತ್ತರ ಭಾರತದಷ್ಟು ಉತ್ತಮವಲ್ಲ. ಇಲ್ಲಿರುವವರೆಲ್ಲ ಗುದತುಂಬ ಸೊಕ್ಕು ತುಂಬಿಕೊಂಡ ಕನ್ನಡಿಗರು... ಅಂತೆಲ್ಲ ಹೇಳಿ ಜಾರಿಕೊಳ್ಳುವ ಸಂದರ್ಭದಲ್ಲಿ ನಾನೇ ಒಂದು ಕ್ಷಣ ಅವಲೋಕಿಸಿದೆ, ಏಕೆ ಈ ವಿದ್ಯಾರ್ಥಿ ಈ ತರಹ ಕನ್ನಡದ ಬಗ್ಗೆ ಕೇವಲವಾಗಿ ಮಾತಾಡಲು ಬಿಟ್ಟನು ಅಂತ. ಆಗ ನನಗೆ ಗೊತ್ತಾಯಿತು ಈ ಹುಡುಗನೂ ಒಬ್ಬ ಉತ್ತರ ಭಾರತದವನೇ ಆಗಿದ್ದು ಇವನೂ ಇದೇ ಅಭಿಪ್ರಾಯ ಹೊಂದಿದವನೆಂದು. ಹಾಗಾಗಿ ಈತ ಅವನನ್ನು ಎದುರು ಹಾಕಿಕೊಳ್ಳಲಾರನೆಂದು ನಾನು ಮಧ್ಯ ಬಾಯಿ ಹಾಕಿದೆ. ಆಗ ಅವನು ನೀನು ಈ ವಿಚಾರಕ್ಕೆ ಸಂಬಂಧಿತನಲ್ಲ, ನಾನು ಅವನಿಗೆ ಕೇಳಿದ್ದು ಅಂತ ರೇಗಿದ, ನಾನು ಮೈಸೂರು ಮಾತ್ರವೇ ಅಲ್ಲ ಇನ್ನು ಮೂರು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಅವನಿಗೇನು ಕೇಳುತ್ತೀಯ, ನಾನು ಹೇಳುತ್ತೀನಿ ಕೇಳು ..ಇದೇನು ಸ್ವತಂತ್ರ ಭಾರತ ಸರಕಾರದ ನೆರವಿನಿಂದ ಕಟ್ಟಿರುವ ವಿಶ್ವವಿದ್ಯಾಲಯ ಇದಲ್ಲ, ಇದು ಕನ್ನಡಿಗರು ಬೆವರು ಹರಿಸಿ ಕಟ್ಟ ವಿಶ್ವವಿದ್ಯಾಲಯ, ಇದೇ ಕನ್ನಡಿಗರ ಹೆಮ್ಮೆಯ ಪ್ರತೀಕ... ಅಂತ ಹೇಳಿದಕ್ಕೆ ಕೈ ಕೈ ಗುದ್ದಿ ಕದನಕ್ಕೆ ಇಳಿದಾಗ ಅಲ್ಲೇ ನೆರದಿದ್ದ ಇತರ ವಲಸಿಗರು ಅವನನ್ನು ಜಗಳದಿಂದ ಬಿಡಿಸಿಕೊಂಡು ಕರೆದುಕೊಂಡು ಹೋದರು ಆದರೆ ನನಗೆ ಯಾರೂ ಮಿತ್ರರು ಸುತ್ತಮುತ್ತೂಲ ಕಾಣಲಿಲ್ಲ. ಅವನನ್ನು ಎಳೆದುಕೊಂಡು ಹೋಗುತ್ತಲೇ ಅವನು " I hate south India" ಅಂತ ಚೀರುತ್ತ ಸಾಗಿದ. ನನ್ನ ಮನಸ್ಸು ಕಲುಕಿ ಹೋಗಿತ್ತು. ನಾನು ಅಸಹಾಯಕ ಸ್ಥಿತಿಯಲ್ಲಿದ್ದೆ.

ಒಂದು ದಿನ ಬೆಂಗಳೂರಿನ ಕೋರಮಂಗಲದಲ್ಲಿ ವೇಮನ ಕಾಲೇಜಿನಲ್ಲಿ ನನ್ನ ಇಂಜನೀರಿಂಗ್ ಪದವಿಯ ಸ್ನಾತಕೋತ್ತರ ಪ್ರಮಾಣ ಪತ್ರ ಪಡೆಯವ ಸಲುವಾಗಿ ಹೋಗಿ ತೆರಳಿದ್ದೆ. ಮನೆಗೆ ಸಾಗುವ ಸಾರಿಗೆ ಬಸ್ 201 ಹತ್ತಿದ್ದೆ. ಅಲ್ಲಿ ಯಾವನೋ ವಲಸಿಗ ಹಿಂದಿಯಲ್ಲಿ ಕೊನೆಯ ನಿಲ್ದಾಣ ಯಾವುದೆಂದು ಕೇಳಿದ. ಕಂಡಕ್ಟರಪ್ಪ ದುಡ್ಡು ಕೇಳಿದ, ಈತ ನಿರಾಕರಿಸಿದ. ಮತ್ತೆ ಇಂಗ್ಲೀಷಿನಲ್ಲಿ ಅದೇ ಕೇಳಿದ. ಕಂಡಕ್ಟರಪ್ಪ ಇಂಗ್ಲೀಷಿನಲ್ಲಿ ಹೇಳಕ್ಕೆ ಬರಲ್ಲ ಅಂದ. ಅವನು ರೇಗಿ ಹೋದ, ಎಲ್ಲರು ಮಾತಾಡುವ ಭಾಷೆ ಬರದಿದ್ದರೆ ನೀನು ಏಕು ಈ ಕೆಲಸ ಮಾಡಬೇಕು ಅಂತ ರೇಗಿದ. ಆಗ ಕಂಡಕ್ಟರಪ್ಪನಿಗೂ ವಲಸಿಗನಿಗೂ ಕೈ ಕೈ ತಿಕ್ಕಾಟ ಆರಂಭಿಸಿತು. ಕೊನೆಗೆ ವಲಸಿಗ ಇದರಿಂದ ಬೇಸರಗೊಂಡು ಬಸ್ಸಿನಿಂದ ಹೊರಗಿಳಿದ. ಆಗ ಕಂಡಕ್ಟರಪ್ಪ ಹೇಳುತ್ತಾನೆ, ನಾನೇ ಕರ್ನಾಟಕ ಸರಕಾರದ ನೌಕರ, ಈತ ಕೆಲಸವನ್ನು ಅರಿಸಿಕೊಂಡು ಬಂದವ, ಇವನ ಭಾಷೆ ಕಲಿತುಕೊಂಡು ಮಾತಾಡುವುದಕ್ಕೆ ಈ ಸ್ವಾಮಿ ನನ್ನನ್ನು ಏನು ಅವನ ಮನೇ ಜವಾನ ಅಂತ ಅಂದುಕೊಂಡುಬಿಟ್ಟಿದ್ದಾನೆ...ಬಡ್ಡಿಮಗನೆ...ಅಂದುಬಿಟ್ಟ.

Comments